ಬೆಂಗಳೂರು: ಲಾಕ್ ಡೌನ್ ನಿಧಾನವಾಗಿ ತೆರೆಯುವುದರ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನಿಸುತ್ತಿರುವ ಬೆನ್ನಲ್ಲೇ ಕೇವಲ ಐಟಿ-ಬಿಟಿಯವರನ್ನು ಮಾತ್ರ ಕೇಂದ್ರವಾಗಿಸಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆರೋಪಿಸಿದ್ದಾರೆ.ಜುಲೈ 31 ರವರೆಗೂ ಐಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದ್ದಕ್ಕೆ ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೇವಲ ಐಟಿ-ಬಿಟಿಯವರು ಮಾತ್ರ ಉದ್ಯೋಗಿಗಳೇ? ನಮ್ಮಂತಹ ಸಾಮಾನ್ಯ ಕಂಪನಿಗಳಲ್ಲಿ ಕೆಲಸ ಮಾಡುವವರ ಗತಿಯೇನು? ನಾವು