ಈ ರೀತಿಯ ಕೊರೋನಾ ಸೋಂಕು ಬಂದರೆ ಅಪಾಯ ಹೆಚ್ಚು!

ಬೆಂಗಳೂರು| Krishnaveni K| Last Modified ಬುಧವಾರ, 19 ಆಗಸ್ಟ್ 2020 (10:05 IST)
ಬೆಂಗಳೂರು: ಎಷ್ಟೋ ಜನರಿಗೆ ಇಂದು ಕೊರೋನಾ ಬಂದರೂ ಬೇಗನೇ ಸೋಂಕು ನಿವಾರಣೆಯಾಯಿತು ಎಂದು ಖುಷಿಪಟ್ಟಿರಬಹುದು. ಆದರೆ ಈ ರೀತಿಯ ಸಣ್ಣ ಮಟ್ಟಿಗಿನ ಲಕ್ಷಣಗಳೊಂದಿಗೆ ಕೊರೋನಾ ಬಂದರೂ ಅವರಿಗೆ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ತಜ್ಞರು ಹೇಳಿದ್ದಾರೆ.
 

ಕಡಿಮೆ ಲಕ್ಷಣಗಳಿರುವ ರೋಗಿಗಳಲ್ಲೂ ದೇಹದ ಪ್ರತಿಕಾಯ ನಶಿಸಿ ಹೋಗುವುದಲ್ಲದೇ ಭವಿಷ್ಯದಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗಬಹುದು ಎಂದು ಅಧ‍್ಯಯನಕಾರರು ಹೇಳಿದ್ದಾರೆ. ಅಷ್ಟೇ ಅಲ್ಲ, ಇಂದು ಕೊರೋನಾದಿಂದ ಮುಕ್ತರಾದವರು ಮುಂದೊಂದು ದಿನ ಮಾನಸಿಕ ಖಾಯಿಲೆಗೆ ಬಯಲಾಗುವ ಅಪಾಯವೂ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :