ಕೊರೋನಾ ಬಗ್ಗೆ ಹಗುರ ಮಾತನಾಡಿದ್ದ ಕೇಂದ್ರ ಸಚಿವರಿಗೇ ಈಗ ಸೋಂಕು ದೃಢ

ನವದೆಹಲಿ| Krishnaveni K| Last Modified ಭಾನುವಾರ, 9 ಆಗಸ್ಟ್ 2020 (11:55 IST)
ನವದೆಹಲಿ: ಈ ಹಪ್ಪಳ ಸೇವಿಸಿದರೆ ಕೊರೋನಾ ಹೋಗುತ್ತೆ ಎಂದು ಹಗುರ ಮಾತನಾಡಿದ್ದ ಕೇಂದ್ರ ಸಚಿವ ಅರ್ಜುನ್ ಮೇಘವಾಲಗೆ ಈಗ ಕೊರೋನಾ ಸೋಂಕು ದೃಢಪಟ್ಟಿದೆ.

 
ಹಪ್ಪಳ ತಯಾರಿಸುವ ಕಂಪನಿಯೊಂದನ್ನು ಪ್ರಚುರಪಡಿಸಲು ಕೇಂದ್ರ ಸಚಿವರು ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಈ ಹಪ್ಪಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದನ್ನು ತಿಂದರೆ ಕೊರೋನಾ ಬರಲ್ಲ ಎಂದು ಹೇಳಿಕೆ ನೀಡಿದ್ದರು.
 
ಈಗ ಅದೇ ಸಚಿವರಿಗೆ ಕೊರೋನಾ ತಗುಲಿರುವುದು ವಿಪರ್ಯಾಸವಾಗಿದೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಸಚಿವರು ಸದ್ಯಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :