ಕೋವಿಡ್ ಪರೀಕ್ಷೆ ಚುರುಕುಗೊಳಿಸಲು ಮೊಬೈಲ್ ಟೀಂ ಸಿದ್ಧಪಡಿಸಿದ ಬಿಬಿಎಂಪಿ

ಬೆಂಗಳೂರು| pavithra| Last Updated: ಶನಿವಾರ, 18 ಜುಲೈ 2020 (11:19 IST)
ಬೆಂಗಳೂರು : ಕೋವಿಡ್ ಪರೀಕ್ಷೆ ಚುರುಕುಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಅದಕ್ಕಾಗಿ  ಮೊಬೈಲ್ ಟೀಂ ಸಿದ್ಧಪಡಿಸಿದೆ.

ಬೆಂಗಳೂರಿನಲ್ಲಿ ಕೊರೊನಾ ಕೇಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅದನ್ನು ನಿಯಂತ್ರಿಸಲು ಬೆಂಗಳೂರು ಮಹಾನಗರ ಪಾಲಿಕೆ ಮನೆ ಮನೆಗೆ ತೆರಳಿ ಹಿರಿಯ ನಾಗರಿಕರಿಗೆ ಕೊರೊನಾ ಪರೀಕ್ಷೆ ಮಾಡುವ ನಿರ್ಧಾರ ಕೈಗೊಂಡಿದೆ. ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗೆ 8 ಕಂಟ್ರೋಲ್ ರೂಂ ಸಿದ್ಧಪಡಿಸಿದೆ.

ಪ್ರತಿವಲಯದ ಕಂಟ್ರೋಲ್ ರೂಂಗೂ ಅಧಿಕಾರಿಗಳ ನೇಮಕ ಮಾಡಿದೆ. 115 ತಂಡಗಳು ನಗರದಲ್ಲಿ ಸಂಚರಿಸಿ ಪರೀಕ್ಷೆ ಮಾಡಲಿದೆ ಎನ್ನಲಾಗಿದೆ. ಲಕ್ಷಣ ಇರುವವರು ಹಿರಿಯ ನಾಗರಿಕರು ಕರೆ ಮಾಡ್ಬೇಕು.  ಕರೆ ಮಾಡಿದರೆ ಮನೆ ಬಾಗಿಲಿಗೆ ಬಂದು ಕೊವಿಡ್ ಪರೀಕ್ಷೆ ನಡೆಸಲಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :