ಬೆಂಗಳೂರು: ಎಷ್ಟು ದಿನಗಳಾಗಿತ್ತು ಹೊರಬಂದು.. ಎಂದಿನಂತೆ ಕಚೇರಿಗೆ ತೆರಳಿ..! ಅಂತೂ ಲಾಕ್ ಡೌನ್ ನಿಯಮ ಸಡಿಲಿಕೆಯಾಗಿದೆ ಎಂದು ಸರ್ಕಾರ ಘೋಷಿಸುತ್ತಿದ್ದಂತೇ ಜನರೂ ಮೈಮರೆತಿದ್ದಾರೆ. ದಿನಾ ಸಾಯೋರಿಗೆ ಅಳುವವರು ಯಾರು ಅಂತಾರಲ್ಲ? ಹಾಗೆಯೇ ಕೊರೋನಾ ಎಂದು ಎಷ್ಟು ದಿನ ಕೊರಗುತ್ತಾ ಮನೆಯಲ್ಲೇ ಕೂರುವುದು? ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೇ ಅಂಗಡಿ-ಕಚೇರಿಗಳು ಪುನರಾರಂಭವಾಗಿದ್ದು, ಜಗತ್ತು ನಿಧಾನವಾಗಿ ಸಾಮಾನ್ಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ.ಎಷ್ಟೋ ದಿನಗಳ ನಂತರ ಹೊರ ಬಂದ ಖುಷಿಗೆ ಜನ ಕೊರೋನಾವನ್ನೂ ಮರೆತಿದ್ದು, ಸಾಮಾಜಿಕ ಅಂತರಕ್ಕೂ