ಬೆಂಗಳೂರು: ಕೊರೋನಾ, ಲಾಕ್ ಡೌನ್ ನಿಂದಾಗಿ ಮೊದಲೇ ಜನರಿಗೆ ಆದಾಯವಿಲ್ಲದೇ ನಿತ್ಯದ ಜೀವನಕ್ಕೆ ಪರದಾಡುವಂತಾಗಿದೆ. ಅದರ ಮೇಲೆ ಇದೀಗ ಗ್ರಾಹಕರಿಗೆ ವಿದ್ಯುತ್ ನಿಗಮಗಳು ದುಬಾರಿ ಬಿಲ್ ನೀಡಿ ಶಾಕ್ ಕೊಟ್ಟಿದೆ. ಲಾಕ್ ಡೌನ್ ನಿಂದಾಗಿ ಕಳೆದ ತಿಂಗಳು ವಿದ್ಯುತ್ ಬಿಲ್ ನೀಡಿರದ ಎಲ್ಲಾ ವಿದ್ಯುತ್ ನಿಗಮಗಳು ಈಗ ಇದ್ದಕ್ಕಿದ್ದಂತೆ ಸಾಮಾನ್ಯವಾಗಿ ನೀಡುವುದಕ್ಕಿಂತಲೂ ಹೆಚ್ಚು ಬಿಲ್ ನೀಡಿರುವುದು ಗ್ರಾಹಕರಿಗೆ ನಿಜಕ್ಕೂ ಬರೆ ಎಳೆದಂತಾಗಿದೆ. ಸಾಮಾನ್ಯ ಬಿಲ್ ಗಿಂತ 200 ರಿಂದ 300