ಮುಂಬೈ : ಕರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಆಯಂಟಿ ರೇಬಿಸ್ ಲಸಿಕೆ ನೀಡಿರುವ ಎಡವಟ್ಟು ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಆ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್ನನ್ನು ಅಮಾನತು ಮಾಡಲಾಗಿದೆ. ಇಂಥದ್ದೊಂದು ಎಡವಟ್ಟು ಮಾಡಿರುವುದು ಕಲ್ವಾದಲ್ಲಿರುವ ಸರ್ಕಾರಿ ಮೆಡಿಕಲ್ ಸೆಂಟರ್ನಲ್ಲಿ. ರಾಜಕುಮಾರ್ ಯಾದವ್ ಎನ್ನುವವರು ಕರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದರು. ಆದರೆ ಅಲ್ಲಿ ರೇಬಿಸ್ ಲಸಿಕೆಯೂ ನಡೆಯುತ್ತಿದ್ದರಿಂದ ಆ ಕ್ಯೂನಲ್ಲಿ ಅವರು ನಿಂತಿದ್ದರು. ಅವರು ಲಸಿಕೆ