ಬೆಂಗಳೂರು: ಕೊರೋನಾವೈರಸ್ ಎಂಬ ಮಹಾಮಾರಿ ಎಲ್ಲಾ ವರ್ಗದ ಜನರ ಜೀವನವನ್ನೇ ಅಲ್ಲೋಕಲ್ಲೋ ಮಾಡಿದೆ. ವಿದ್ಯಾರ್ಥಿಗಳಂತೂ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.ಎಸ್ಎಸ್ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳು ಅಂತಿಮ ವರ್ಷದ ಪರೀಕ್ಷೆ ಯಾವಾಗಲೋ ಎಂಬ ಆತಂಕದಲ್ಲಿದ್ದರೆ, ಉಳಿದ ವಿದ್ಯಾರ್ಥಿಗಳಿಗೆ ಶಾಲೆ ಯಾವಾಗ ಆರಂಭವಾಗಬಹುದು ಎಂಬ ಚಿಂತೆ. ಇದಕ್ಕೆಲ್ಲಾ ಸದ್ಯಕ್ಕಂತೂ ಉತ್ತರವಿಲ್ಲ.ಆದರೆ ನಿಗದತಿ ಸಮಯಕ್ಕೆ ಶಾಲೆ, ಕಾಲೇಜುಗಳು ಆರಂಭವಾಗಲ್ಲ ಎಂಬುದು ಎಲ್ಲರಿಗೋ ಗೊತ್ತೇ ಇದೆ. ಹಾಗಿದ್ದರೂ ವರ್ಷದ ಪಠ್ಯಕ್ರಮ ಪೂರ್ತಿ ಮಾಡುವುದು ಶಿಕ್ಷಕರು, ಶಾಲೆ ಆಡಳಿತ