ಆನ್ ಲೈನ್ ಶಿಕ್ಷಣದ ಪ್ರಭಾವ: ವಿದ್ಯಾರ್ಥಿಗಳಲ್ಲಿ ತಲೆನೋವು, ಕಣ್ಣಿನ ಸಮಸ್ಯೆ!

ಬೆಂಗಳೂರು| Krishnaveni K| Last Modified ಸೋಮವಾರ, 18 ಮೇ 2020 (09:02 IST)
ಬೆಂಗಳೂರು: ಪರಿಕಲ್ಪನೆ ಏನೋ ಉತ್ತಮವೇ ಸರಿ. ಆದರೆ ಇದರಿಂದ ವಿದ್ಯಾರ್ಥಿಗಳ ಮೇಲೆ ಅಡ್ಡಪರಿಣಾಮಗಳೂ ಆಗುತ್ತಿವೆ.
 

‘ಬೆಳಿಗ್ಗೆಯಿಂದ ಸಂಜೆವರೆಗೆ ಆನ್ ಲೈನ್ ನಲ್ಲೇ ಇರಬೇಕು. ಎರಡು ಗಂಟೆ ನಿರಂತರ ಕ್ಲಾಸ್ ಇರುತ್ತದೆ. ಅದಾದ ಬಳಿಕ ಕೇವಲ ಅರ್ಧ ಗಂಟೆ ಗ್ಯಾಪ್ ಇರುತ್ತದೆ. ಲ್ಯಾಪ್ ಟಾಪ್ ನೋಡುತ್ತಾ ತಲೆನೋವು, ಕಣ್ಣುರಿ ಬರುತ್ತಿದೆ. ಬೆಳಿಗ್ಗೆ ಎದ್ದಾಗ ಕಣ್ಣು ತೆರೆಯಲೂ ನೋವಾಗುತ್ತದೆ’ ಹೀಗಂತ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ಅಳಲು ತೋಡಿಕೊಳ‍್ಳುತ್ತಾಳೆ.
 
ಇದು ಬಹುತೇಕ ವಿದ್ಯಾರ್ಥಿಗಳ ಸಮಸ್ಯೆಯಾಗಿದೆ. ಜಗತ್ತು ಆಧುನಿಕವಾಗುತ್ತಿದ್ದಂತೇ ಶಿಕ್ಷಣದಲ್ಲೂ ಆಧುನಿಕತೆ ತರಬೇಕು ಎನ್ನುವವರಿಗೆ ಇದೊಂದು ಎಚ್ಚರಿಕೆಯ ಕರೆಗಂಟೆ. ಸದ್ಯಕ್ಕೆ ಕೊರೋನಾದಿಂದಾಗಿ ಬೇರೆ ದಾರಿಯಿಲ್ಲದೇ ಕೆಲವು ಶಾಲೆಗಳು, ಕಾಲೇಜುಗಳು ಆನ್ ಲೈನ್ ಶಿಕ್ಷಣದ ಮೊರೆ ಹೋಗುತ್ತಿವೆ. ಆದರೆ ನಿರಂತವಾಗಿ ವಿಡಿಯೋ ವೀಕ್ಷಿಸುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಸಮಸ್ಯೆ ಕಂಡುಬರುತ್ತಿದೆ ಎನ್ನುವುದು ಅಷ್ಟೇ ಸತ್ಯ.
ಇದರಲ್ಲಿ ಇನ್ನಷ್ಟು ಓದಿ :