ಕೊರೋನಾ ಸೋಂಕಿತರನ್ನು ಅಪರಾಧಿಗಳಂತೆ ಕಾಣಬೇಡಿ: ಸುಮಲತಾ ಅಂಬರೀಶ್

ಬೆಂಗಳೂರು| Krishnaveni K| Last Modified ಶನಿವಾರ, 18 ಜುಲೈ 2020 (10:12 IST)
ಬೆಂಗಳೂರು: ಕೊರೋನಾದಿಂದ ಗುಣಮುಖರಾಗುತ್ತಿರುವ ನಟಿ, ಸಂಸದೆ ಸುಮಲತಾ ಅಂಬರೀಶ್ ತಮ್ಮ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ.
 

‘ನನ್ನ ಕ್ವಾರಂಟೈನ್ ಅವಧಿ ಮುಗಿಯಲು ಕೆಲವೇ ದಿನಗಳಿವೆ. ನಂತರ ಆರೋಗ್ಯ ಪರೀಕ್ಷೆ ಆದ ಕೂಡಲೇ ಸಾರ್ವಜನಿಕ ಜೀವನಕ್ಕೆ ಮರಳುವೆ.  ಸದ್ಯ ನಿಮ್ಮಲ್ಲಿ ಒಂದು ವಿಚಾರವನ್ನು ಹೇಳಲು ಬಯಸುವೆ.
 
ನಾನು ಕೊರೋನಾದಿಂದ ಗುಣಮುಖವಾಗಿದ್ದೇನೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಕ್ವಾರಂಟೈನ್ ಅವಧಿ ಮುಗಿದು ಪರೀಕ್ಷೆ ನಡೆಸಿದ ಬಳಿಕವೇ ಇದು ಗೊತ್ತಾಗಲಿದೆ. ಸದ್ಯಕ್ಕೆ ಔಷಧಿ ಮತ್ತು ಶುಶ್ರೂಷೆ ಮುಂದುವರಿದಿದೆ. ನನಗೆ ಹಾರೈಸಿದ ನಿಮಗೆಲ್ಲರಿಗೂ ಧನ್ಯವಾದಗಳು.
 
ಕೊರೋನಾ ಸೋಂಕಿತರನ್ನು ಅಪರಾಧಿಗಳಂತೆ ಕಾಣುವುದು, ಸಾಮಾಜಿಕ ನಿಂದನೆ ಮಾಡುವುದು ಸರಿಯಲ್ಲ. ಇದು ಒಂದು ಯುದ್ಧ, ನಾವೆಲ್ಲರೂ ಜತೆಯಾಗಿ ಹೋರಾಡಬೇಕಿದೆ. ಸೋಂಕಿತರು ಕ್ವಾರಂಟೈನ್ ಅವಧಿಯನ್ನು ಪೂರೈಸುವುದು, ಸರ್ಕಾರದ ನಿಯಮಗಳನ್ನು ಪಾಲಿಸುವುದು ತುಂಬಾ ಮುಖ್ಯ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸುರಕ್ಷಿತವಾಗಿರಿ’ ಎಂದು ಮನವಿ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :