ದುಬೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೊರೋನಾ ಭಯ ಅವರಿಸುತ್ತಿದ್ದಂತೇ ದಿಡೀರ್ ಆಗಿ ಸುರೇಶ್ ರೈನಾ ವೈಯಕ್ತಿಕ ಕಾರಣ ನೀಡಿ ಭಾರತಕ್ಕೆ ಮರಳಲು ಕಾರಣವೇನು ಎಂಬುದರ ಬಗ್ಗೆ ಈಗ ಹಲವು ವಿಶ್ಲೇಷಣೆಗಳು ನಡೆಯುತ್ತಿವೆ.ಮೂಲಗಳ ಪ್ರಕಾರ ರೈನಾ ಕುಟುಂದಲ್ಲಿ ನಡೆದ ಕೊಲೆಯೇ ಅವರು ಮರಳಲು ಕಾರಣ ಎನ್ನಲಾಗಿದೆಯಾದರೂ, ಇನ್ನು ಕೆಲವರು ಕೊರೋನಾ ಭಯದಿಂದ ರೈನಾ ಮರಳಿದ್ದಾರೆ ಎನ್ನುತ್ತಿದ್ದಾರೆ.ಆಂಗ್ಲ ಮಾಧ್ಯಮವೊಂದರ ಪ್ರಕಾರ ಚೆನ್ನೈ ತಂಡದಲ್ಲಿ