ಬೆಂಗಳೂರು: ದೇಶದಲ್ಲಿ ಸರ್ಕಾರಗಳ ಪರಿಸ್ಥಿತಿ ಹೇಗಾಗಿದೆ ಎಂದರೆ ಅತ್ತ ಲಾಕ್ ಡೌನ್ ಮುಂದುವರಿಸಿದರೂ ಕಷ್ಟ, ಮುಕ್ತಗೊಳಿಸಿದರೂ ಸಂಕಷ್ಟ ಎನ್ನುವಂತಾಗಿದೆ. ಲಾಕ್ ಡೌನ್ 3 ಮುಗಿದು ಲಾಕ್ ಡೌನ್ 4 ಆರಂಭವಾಗಿರುವುದರ ಬಗ್ಗೆ ಟ್ವಿಟರಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಂದಾದ ಮೇಲೊಂದರಂತೆ ಲಾಕ್ ಡೌನ್ ಮಾಡುತ್ತಾ ಹೋದರೆ ನಮ್ಮ ಊಟಕ್ಕೆ ಏನು ಗತಿ? ಉದ್ಯೋಗಕ್ಕೆ ಯಾರು ಗ್ಯಾರಂಟಿ ಕೊಡ್ತಾರೆ? ಈ ರೀತಿ ನಾನಾ ಪ್ರಶ್ನೆಗಳನ್ನಿಟ್ಟು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈಗಾಗಲೇ ಹಲವಾರು ಮಂದಿ