ಗರ್ಭಾವಸ್ಥೆಯಲ್ಲಿರುವ ಮಗುವಿಗೆ ಈ ವಾರದಲ್ಲಿ ಕೊರೋನಾ ಸೋಂಕು ತಗುಲುವ ಅಪಾಯ ಹೆಚ್ಚು!

ಬೆಂಗಳೂರು| Krishnaveni K| Last Modified ಶುಕ್ರವಾರ, 7 ಆಗಸ್ಟ್ 2020 (09:52 IST)
ಬೆಂಗಳೂರು: ಗರ್ಭಾವಸ್ಥೇಯಲ್ಲಿರುವ ಮಗುವಿಗೂ ಕೊರೋನಾ ಅಪಾಯ ತಪ್ಪಿದ್ದಲ್ಲ ಎನ್ನುವುದು ಸಾಕ್ಷಿ ಸಮೇತ ಸಾಬೀತಾಗಿದೆ. ಇದುವರೆಗೆ ಏಕಮಾತ್ರ ಪ್ರಕರಣ ದಾಖಲಾದರೂ ಗರ್ಭಾವಸ್ಥೆಯಲ್ಲಿರುವ ಮಗುವಿಗೆ ಯಾವಾಗ ಅಪಾಯ ಹೆಚ್ಚು ಎಂಬುದರ ಬಗ್ಗೆ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

 
ಗರ್ಭಾವಸ್ಥೆಯಲ್ಲಿರುವ ಮಗುವಿಗೆ ಅದರಲ್ಲೂ ಎರಡನೇ ವಾರದಲ್ಲಿ ಸೋಂಕು ತಗುಲುವ ಅಪಾಯ ಹೆಚ್ಚು ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
 
ಮೊದಲ 14 ದಿನಗಳಲ್ಲಿ ಗರ್ಭಾವಸ್ಥ ಶಿಶುವಿನ ಬೆಳವಣಿಗೆಗೆ ನಿರ್ದಿಷ್ಠ ಪೋಷಕಾಂಶ ಕಣಗಳು ಬಿಡುಗಡೆಯಾಗುತ್ತವೆ. ಇವು ಕೊರೋನಾ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚು. ಹೀಗಾಗಿ ಗರ್ಭಿಣಿಯರು ಈ ಮೊದಲ ಎರಡು ವಾರಗಳಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಅಧ‍್ಯಯನಕಾರರು ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :