ಕೊರೊನಾ ನಿಯಮ ಉಲ್ಲಂಘನೆ; ಥಿಯೇಟರ್ ವಿರುದ್ಧ ಪ್ರಕರಣ ದಾಖಲು

ಚೆನ್ನೈ| pavithra| Last Updated: ಶುಕ್ರವಾರ, 15 ಜನವರಿ 2021 (13:54 IST)
ಚೆನ್ನೈ : ವಿಜಯ್ ಅಭಿನಯದ ಬಹುನಿರೀಕ್ಷೆಯ ಮಾಸ್ಟರ್ ಚಿತ್ರವನ್ನು ಜನವರಿ 13ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲಾಗಿದೆ.

ಈ ಸಂಭ್ರಮದ ನಡುವೆ ಚಿತ್ರಮಂದಿರದಲ್ಲಿ ವಿಜಯ್ ಅಭಿಮಾನಿಗಳು ಮಾಸ್ಕ್ ಧರಿಸದೆ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಹಾಗೇ ಕೊರೊನಾ ಕಾರಣಗಳಿಂದ ಚಿತ್ರಮಂದಿರಗಳಲ್ಲಿ 50% ಸೀಟುಗಳನ್ನು ಹಾಕಲು ಅವಕಾಶ ನೀಡಲಾಗಿತ್ತು, ಆದರೆ ಈ ನಡುವೆ ಚೆನ್ನೈ ಕಾಸಿ ಥಿಯೇಟರ್ ಹೆಚ್ಚಿನ ಟಿಕೆಟ್ ವಿಧಿಸಿದೆ. ಶೇಕಡಾ 50ಕ್ಕಿಂತ ಹೆಚ್ಚು ಸೀಟುಗಳನ್ನು ಹಾಕಿದೆ, ಕೊರೊನಾ ನಿಯಮ ಉಲ್ಲಂಘಿಸಿದೆ. ಹಾಗಾಗಿ ಪೊಲೀಸರು ಕಾಸಿ ಥಿಯೇಟರ್ ವಿರುದ್ಧ ಪ್ರಕರಣ ದಾಖಲಿಸಿ 5000 ರೂ ವಿಧಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :