ನವದೆಹಲಿ(ಆ.02): ಕೊರೋನಾ ವೈರಸ್ ಪ್ರಪಂಚದಾದ್ಯಂತ ಈ ದಿನಗಳಲ್ಲಿ ವಿಭಿನ್ನ ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಆದರೀಗ ಅಧ್ಯಯನವೊಂದರಲ್ಲಿ ಕೊರೋನಾ ಸೋಂಕಿತರ ಕಣ್ಣೀರಿನ ಮೂಲಕವೂ ಈ ವೈರಸ್ ಹರಡಬಹುದು ಎಂಬ ವಿಚಾರ ಬೆಳಕಿಗೆ ಬಂದಿದೆ. ಅಮೃತಸರದ ಸರ್ಕಾರಿ ವೈದ್ಯಕೀಯ ಕಾಲೇಜು ಈ ಅಧ್ಯಯನ ನಡೆಸಿದೆ.