ಬೆಂಗಳೂರು: ಕೊರೋನಾ ಬಂತೆಂದು ಲಾಕ್ ಡೌನ್ ಮಾಡಿ ಎರಡು ತಿಂಗಳಾಗುತ್ತಾ ಬಂದಿದೆ. ಹಾಗಿದ್ದರೂ ದಿನಕ್ಕೊಂದು ಸೋಂಕಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಹೀಗಾಗಿ ಕೊರೋನಾ ಈಗ ನಮ್ಮ ಜೀವನದ ಭಾಗವಾಗಿಬಿಟ್ಟಿದೆ.ಇನ್ನು ಉಳಿದಿರುವುದು ಒಂದೇ ದಾರಿ. ನಾವೀಗ ಕೊರೋನಾ ಜತೆ ಬದುಕಲು ಕಲಿಯಬೇಕಿದೆ. ಕೊರೋನಾಗೆ ಹೆದರಿ ಎಷ್ಟು ದಿನ ಮನೆಯಲ್ಲೇ ಕೂರಲು ಸಾಧ್ಯ? ದುಡಿಮೆ ಮರೆತು ಕೂತರೆ ಜೀವನ ಕಳೆದುಕೊಳ್ಳಬೇಕಾಗುತ್ತದೆ. ಸರ್ಕಾರದ ಬೊಕ್ಕಸಕ್ಕೂ ತುಂಬಲಾರದಷ್ಟು ನಷ್ಟವಾಗುತ್ತದೆ. ಎಷ್ಟೋ ಜನ ನಿರುದ್ಯೋಗಿಗಳಾಗುತ್ತಾರೆ. ಹಸಿವು, ಬಡತನ