ಜನತಾ ಕರ್ಫ್ಯೂ ಬಗ್ಗೆ ರಾಜ್ಯದ ಪ್ರಭಾವಿ ಸಚಿವ ಹೇಳಿದ್ದೇನು?

ಬೆಂಗಳೂರು| Jagadeesh| Last Updated: ಸೋಮವಾರ, 23 ಮಾರ್ಚ್ 2020 (11:30 IST)
ದೇಶಾದ್ಯಂತ ಕೊರೋನಾ ವೈರಸ್ ನ ಭೀತಿ ಎದುರಾಗಿರುವ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು  ಮಾರ್ಚ್ 22ರ ಜನತಾ ಕರ್ಫ್ಯೂ ಆಚರಿಸುವಂತೆ  ಕರೆ ನೀಡಿದ್ದಾರೆ.

ಭಾರತದ ಒಬ್ಬ ಜಾಗೃತ ಪ್ರಜೆಯಾಗಿ, ಸಂಕಲ್ಪ ಹಾಗೂ ಸಂಯಯದಿಂದ ಈ ’ಜನತಾ ಕರ್ಫ್ಯೂ’ ಪಾಲಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯ.  ಸ್ವಯಂ ಪ್ರೇರಣೆಯಿಂದ ನಡೆಯಲಿರುವ ’ಜನತಾ ಕರ್ಫ್ಯೂ’ವನ್ನು ಬೆಂಬಲಿಸೋಣ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
 
ಈ ಸಂದಿಗ್ಧ ಪರಿಸ್ಥಿತಿಯನ್ನು ಎಲ್ಲರೂ ಒಟ್ಟಾಗಿ, ಧೈರ್ಯದಿಂದ ಎದುರಿಸೋಣ ಮತ್ತು ಭಾರತವನ್ನು ಕೊರೋನಾ ಮುಕ್ತ ರಾಷ್ಟ್ರವಾಗಿ ಮಾಡೋಣ ಎಂದು‌ ತಿಳಿಸಿದ್ದಾರೆ.

ನಾವು ಸ್ವಸ್ಥರಾಗಿದ್ದರೆ, ರಾಷ್ಟ್ರವು ಸ್ವಸ್ಥವಾಗಲಿದೆ. ಕೊರೋನಾ ವೈರಸ್ ತಡೆಗೆ ಆಂತರಿಕ ಸಮುದಾಯ ಹರಡುವಿಕೆಯಿಂದ ಅದನ್ನು ತಡೆಗಟ್ಟುವುದು ನಮ್ಮ ಕರ್ತವ್ಯ. ಈ ಹಂತದಲ್ಲಿ 'ಸಾಮಾಜಿಕ ಅಂತರ ' ತುಂಬಾ ಪ್ರಾಮುಖ್ಯ. ಆದ್ದರಿಂದ ಜನತಾ ಕರ್ಫ್ಯೂ ಬೆಂಬಲಿಸಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

 


ಇದರಲ್ಲಿ ಇನ್ನಷ್ಟು ಓದಿ :