ಬೆಂಗಳೂರು: ಕೊರೋನಾವೈರಸ್ ಪತ್ತೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಆರೋಗ್ಯ ಸೇತು ಆಪ್ ನಿಮ್ಮ ವೈಯಕ್ತಿಕ ದಾಖಲೆಗೆ ಕನ್ನ ಹಾಕುತ್ತದೆಯೇ? ನಿಜಾಂಶವೇನು ಗೊತ್ತಾ? ಈ ಬಗ್ಗೆ ಈಗಾಗಲೇ ಸಚಿವ ಪ್ರಕಾಶ್ ಜಾವೇಡ್ಕರ್ ಕೂಡಾ ಸ್ಪಷ್ಟನೆ ನೀಡಿದ್ದರು. ಆರೋಗ್ಯ ಸೇತು ಆಪ್ ಯಾವುದೇ ಕಾರಣಕ್ಕೂ ನಿಮ್ಮ ಪ್ರೈವೆಸಿಗೆ ಧಕ್ಕೆ ತರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.ಇದೀಗ ಸ್ವತಃ ಆರೋಗ್ಯ ಸೇತು ಹೇಳಿಕೆ ಬಿಡುಗಡೆ ಮಾಡಿದ್ದು, ಯಾವುದೇ ವ್ಯಕ್ತಿ ವೈಯಕ್ತಿಕ ಮಾಹಿತಿಗಳನ್ನು ಇದು ಕದಿಯುವುದಿಲ್ಲ.