ರಾಜಕಾರಣಿಗಳಿಗೇ ಕೊರೋನಾ ಅಪಾಯ ಹೆಚ್ಚು ಯಾಕೆ?

corona virus" width="400" />
ಬೆಂಗಳೂರು| Krishnaveni K| Last Modified ಬುಧವಾರ, 5 ಆಗಸ್ಟ್ 2020 (13:11 IST)
ಬೆಂಗಳೂರು: ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರದಲ್ಲಿ ಗೃಹ ಸಚಿವ ಅಮಿತ್ ಶಾಗೆ ಕೊರೋನಾ ಪಾಸಿಟಿವ್ ಬಂದಿರುವುದು ರಾಜಕಾರಣಗಳಲ್ಲಿ ಆತಂಕ ಹೆಚ್ಚಿಸಿದೆ.

 

ಅಷ್ಟಕ್ಕೂ ರಾಜಕಾರಣಿಗಳಿಗೇ ಕೊರೋನಾ ಬೇಗನೇ ತಗುಲುವುದು ಕಾರಣವೂ ಸಾಕಷ್ಟಿದೆ. ರಾಜಕೀಯ ನಾಯಕರು ಹೆಚ್ಚಾಗಿ ಜನರೊಂದಿಗೆ ಬೆರೆಯಬೇಕಾಗುತ್ತದೆ. ಪ್ರತಿನಿತ್ಯ ಅಪರಿಚಿತರೋ, ಚಿರಪರಿಚಿತರೋ ಒಟ್ಟಾರೆ ಹಲವು ಜನರನ್ನು, ಅಧಿಕಾರಿಗಳನ್ನು ಭೇಟಿಯಾಗುತ್ತಲೇ ಇರುತ್ತಾರೆ. ಯಾವುದೋ ಸ್ಥಳಗಳಿಗೆ ಅನಿವಾರ್ಯವಾಗಿ ಭೇಟಿ ನೀಡುತ್ತಲೇ ಇರುತ್ತಾರೆ.
 
ಜನ ಸಂಪರ್ಕ ಹೆಚ್ಚಾಗಿರುವುದರಿಂದ ರಾಜಕೀಯ ನಾಯಕರು ಬೇಗನೇ ಕೊರೋನಾ ಸೋಂಕಿಗೊಳಗಾಗುತ್ತಿದ್ದಾರೆ. ಹೀಗಾಗಿ ಹಲವು ನಾಯಕರು ಈಗ ಜನರ ಎದುರು ಬರಲೂ ಹಿಂಜರಿಯುವಂತಾಗಿದೆ.
ಇದರಲ್ಲಿ ಇನ್ನಷ್ಟು ಓದಿ :