ಬೆಂಗಳೂರು: ಇಂದಿನಿಂದ ಹಸಿರು, ಆರೆಂಜ್ ವಲಯಗಳಲ್ಲಿ ಖಾಸಗಿ, ಸರಕಾರಿ ಕಚೇರಿಗಳನ್ನು ತೆರೆಯಲು ಅವಕಾಶ ನೀಡಿದರೂ ನೌಕರರು ಕಚೇರಿಗೆ ಬರಲು ಹಿಂದೇಟು ಹಾಕುವಂತಾಗಿದೆ. ಕೆಲವು ಕಂಪನಿಗಳು ಮಾತ್ರವೇ ನೌಕರರಿಗೆ ಪಾಸ್, ವಾಹನ ಸೌಕರ್ಯ ಇತ್ಯಾದಿ ಒದಗಿಸುತ್ತಿವೆ. ಹೀಗಾಗಿ ಈ ಕಂಪನಿ ನೌಕರರು ಆರಾಮವಾಗಿ ನೌಕರಿಗೆ ಹಾಜರಾಗಲಿದ್ದಾರೆ.ಆದರೆ ಕೆಲವು ಕಂಪನಿಗಳಲ್ಲಿ ಪಾಸ್ ವ್ಯವಸ್ಥೆಯಾಗಲೀ, ಸಾರಿಗೆ ವ್ಯವಸ್ಥೆಯಾಗಲೀ ಮಾಡಿಲ್ಲ. ಹೀಗಾಗಿ ಇಂತಹ ಕಂಪನಿಗಳ ನೌಕರರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ತಮ್ಮದೇ ವಾಹನಗಳಲ್ಲಿ ಬರುವಾಗ