ಬೆಂಗಳೂರು: ಲಾಕ್ ಡೌನ್ ಪಾಲಿಸದಿದ್ದರೆ ಜೀವಕ್ಕೆ ಆಪತ್ತು. ಲಾಕ್ ಡೌನ್ ಪಾಲಿಸಿದರೆ ಜೀವನಕ್ಕೆ ಕುತ್ತು.. ಇದು ಉದ್ಯೋಗಸ್ಥರ ಸದ್ಯದ ಪರಿಸ್ಥಿತಿ.ಕಂಪನಿ ಬಾಗಿಲು ಮುಚ್ಚಿ ಬರೋಬ್ಬರಿ ತಿಂಗಳಾಗುತ್ತಾ ಬಂದಿದೆ. ಸೋಮವಾರದಿಂದ ಐಟಿ-ಬಿಟಿ ಕಂಪನಿಗಳಿಗೆ ಶೇ. 50 ರಷ್ಟು ಹಾಜರಾತಿಯಲ್ಲಿ ಕಚೇರಿ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಐಟಿ-ಬಿಟಿಯವರು ಈಗಾಗಲೇ ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ.ಆದರೆ ಬೇರೆ ಖಾಸಗಿ ಕಂಪನಿ ಉದ್ಯೋಗಸ್ಥರಿಗೆ, ಮನೆಯಿಂದ ಕೆಲಸ ಮಾಡಲು ಸಾಧ್ಯವಾಗದ ನೌಕರರಿಗೆ ಭವಿಷ್ಯದ ಚಿಂತೆ ಕಾಡಿದೆ.