ಲಲಿತ್ ಮೋದಿ ಅವರು ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ನೇಮಕವಾದ ಕೆಲವೇ ಗಂಟೆಗಳಲ್ಲಿ ಬಿಸಿಸಿಐ ರಾಜಸ್ಥಾನ್ ರಾಯಲ್ಸ್ ಕ್ರಿಕೆಟ್ ಸಂಸ್ಥೆಯನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿ ಕ್ರಿಕೆಟ್ ವ್ಯವಹಾರಗಳ ನಿರ್ವಹಣೆಗೆ ತಾತ್ಕಾಲಿಕ ಸಮಿತಿಯನ್ನು ನೇಮಿಸಿದೆ. ಬಿಸಿಸಿಐ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಆರ್ಸಿಎಗೆ ನಿಷೇಧಿಸಲಾಗಿದೆ. ಬಿಸಿಸಿಐ ನಿಯಮಾವಳಿಗೆ ಬದ್ಧವಾಗಿಲ್ಲದ ಸಂಸ್ಥೆಯನ್ನು ಅಮಾನತುಗೊಳಿಸುವ ಹಕ್ಕು ಅಧ್ಯಕ್ಷರಿಗೆ ಇದ್ದು, ಮಧ್ಯಾಂತರ ಅಧ್ಯಕ್ಷ ಶಿವಲಾಲ್ ಯಾದವ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ತಿಳಿಸಿದರು.