ಇಂಗ್ಲೆಂಡ್ ವಿರುದ್ಧ ಭಾರತ ಮೊದಲ ಟೆಸ್ಟ್ ಪಂದ್ಯದಲ್ಲಿ 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದ್ದು, ಸಾಧಾರಣ ಸ್ಥಿತಿಯಲ್ಲಿದೆ. ನಾಟಿಂಗ್ಹ್ಯಾಮ್ ಟೆಂಟ್ಬ್ರಿಜ್ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಭಾರತದ ಪರ ಆರಂಭಿಕ ಆಟಗಾರ ಮುರಳಿ ವಿಜಯ್ ಅಜೇಯ 55 ರನ್ ಬಾರಿಸಿದ್ದಾರೆ.ಅವರ ಸ್ಕೋರಿನಲ್ಲಿ 11 ಬೌಂಡರಿಗಳಿದ್ದವು. ಶಿಖರ್ ಧವನ್ ಜೇಮ್ಸ್ ಅಂಡರ್ಸನ್ ಬೌಲಿಂಗ್ನಲ್ಲಿ ಮ್ಯಾಟ್ ಪ್ರಿಯರ್ ಅವರಿಗೆ ಕ್ಯಾಚಿತ್ತು ಔಟಾದರು. ಪೂಜಾರ