ಕೊಲೊಂಬೋ: 2011 ರಲ್ಲಿ ಮುಂಬೈನಲ್ಲಿ ನಡೆದ ಭಾರತ-ಶ್ರೀಲಂಕಾ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು ಎಂಬ ಶ್ರೀಲಂಕಾದ ಮಾಜಿ ನಾಯಕ ಅರ್ಜುನ್ ರಣತುಂಗಾ ಹೇಳಿಕೆಯನ್ನು ಅಲ್ಲಿನ ಕ್ರೀಡಾ ಸಚಿವರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಮುಂದಾಗಿದ್ದಾರೆ.ಶ್ರೀಲಂಕಾ ಸರ್ಕಾರದಲ್ಲಿ ಹಾಲಿ ಸಚಿವರೂ ಆಗಿರುವ ರಣತುಂಗಾ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸುವುದಾಗಿ ಅಲ್ಲಿನ ಕ್ರೀಡಾ ಸಚಿವ ದಯಸಿರಿ ಜಯಸೇಖರ ಹೇಳಿದ್ದಾರೆ. ಯಾರಾದರೂ ಈ ಬಗ್ಗೆ ಲಿಖಿತ ದೂರು ನೀಡಿದರೆ ತನಿಖೆಗೆ