ಎಬಿಡಿ ವಿಲಿಯರ್ಸ್ ಗಿತ್ತು ವಿಶ್ವಕಪ್ ನಲ್ಲಿ ಆಡುವಾಸೆ! ಆದರೆ ಒಪ್ಪದ ಆಫ್ರಿಕಾ ಕ್ರಿಕೆಟ್ ಮಂಡಳಿ

ಲಂಡನ್, ಶುಕ್ರವಾರ, 7 ಜೂನ್ 2019 (09:21 IST)

ಲಂಡನ್: ವಿಶ್ವಕಪ್ 2019 ನಲ್ಲಿ ಗಾಯಾಳುಗಳ ಗೂಡಾಗಿರುವ ದ.ಆಫ್ರಿಕಾ ಸತತ ಸೋಲಿನಿಂದ ಕಂಗೆಟ್ಟು ಕೂತಿದೆ. ಇದರ ನಡುವೆ ತಂಡದ ಬಗ್ಗೆ ಸ್ಪೋಟಕ ರಹಸ್ಯವೊಂದು ಬಯಲಾಗಿದೆ.


 
ದ.ಆಫ್ರಿಕಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾಗಿದ್ದ ಎಬಿಡಿ ವಿಲಿಯರ್ಸ್ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದಾರೆ. ಹಾಗಿದ್ದರೂ ಎಬಿಡಿಗೆ ವಿಶ್ವಕಪ್ ನಲ್ಲಿ ತಂಡವನ್ನು ಪ್ರತಿನಿಧಿಸಬೇಕೆಂದು ಆಸೆಯಿತ್ತಂತೆ.
 
ಆದರೆ ವಿಶ್ವಕಪ್ ತಂಡ ಘೋಷಣೆಗೆ ಮೊದಲು ದ.ಆಫ್ರಿಕಾ ಕ್ರಿಕೆಟ್ ಮ್ಯಾನೇಜ್ ಮೆಂಟ್ ಅಲ್ಲದೆ, ನಾಯಕ ಫಾ ಡು ಪ್ಲೆಸಿಸ್, ಕೋಚ್ ಮತ್ತು ಮ್ಯಾನೇಜ್ ಮೆಂಟ್ ಬಳಿ ಎಬಿಡಿ ಈ ಮನವಿ ಮಾಡಿದಾಗ ಇವರು ಯಾರೂ ಒಪ್ಪಲಿಲ್ಲವೆಂಬ ಅಂಶ ಇದೀಗ ಬಯಲಾಗಿದೆ. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಪರ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದ ಎಬಿಡಿಗೆ ಮತ್ತೆ ರಾಷ್ಟ್ರೀಯ ತಂಡ ಕೂಡಿಕೊಳ್ಳುವ ಇರಾದೆಯಿತ್ತು ಎನ್ನಲಾಗಿದೆ. ಆದರೆ ಅದಕ್ಕೆ ಆಫ್ರಿಕಾ ತಂಡದ ಮ್ಯಾನೇಜ್ ಮೆಂಟ್ ತಣ್ಣೀರೆರಚಿತು ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ 2019: ಧೋನಿ ಧರಿಸಿದ ಗ್ಲೌಸ್ ಮೇಲೇ ಎಲ್ಲರ ಕಣ್ಣು!

ಲಂಡನ್: ದ.ಆಫ್ರಿಕಾ ವಿರುದ್ಧ ವಿಶ್ವಕಪ್ ಕೂಟದ ಮೊದಲ ಪಂದ್ಯವಾಡಿದ ಟೀಂ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ...

news

ಶಿಖರ್ ಧವನ್ ರನ್ನು ಮಂಕಡ್ ಔಟ್ ಮಾಡಲು ಯತ್ನಿಸಿದ ದ.ಆಫ್ರಿಕಾ ವೇಗಿ

ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಶಿಖರ್ ಧವನ್ ...

news

ಕೆಎಲ್ ರಾಹುಲ್ ಹೋಲುವ ಕೊಹ್ಲಿ ಫೋಟೋ ಹಾಕಿ ಟ್ರೋಲ್ ಆದ ಐಸಿಸಿ

ದುಬೈ: ವಿಶ್ವಕಪ್ ಕ್ರಿಕೆಟ್ 2019 ರ ಮೊದಲ ಪಂದ್ಯವಾಡುವ ಮೊದಲು ಟೀಂ ಇಂಡಿಯಾ ಗೌರವಾರ್ಥವಾಗಿ ಐಸಿಸಿ ತನ್ನ ...

news

ಐಪಿಎಲ್ ವಿರುದ್ಧ ಸಿಟ್ಟು ಹೊರ ಹಾಕಿದ ದ.ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಫಾ ಡು ಪ್ಲೆಸಿಸ್

ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರಲ್ಲಿ ಯಾಕೋ ದ.ಆಫ್ರಿಕಾಗೆ ಗಾಯಾಳುಗಳದ್ದೇ ಚಿಂತೆಯಾಗಿದೆ. ತಂಡದ ...