ಇಸ್ಲಾಮಾಬಾದ್: ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಎಂದರೆ ಈಗಲೂ ಜಾಗತಿಕ ಕ್ರಿಕೆಟ್ ನಲ್ಲಿ ವಿಶೇಷ ಸ್ಥಾನವಿದೆ. ಮನಸ್ಸು ಮಾಡಿದರೆ ಇವರಿಬ್ಬರನ್ನೂ ಮೀರಿಸುವ ಸಾಮರ್ಥ್ಯ ಪಾಕಿಸ್ತಾನದ ಅಹಮ್ಮದ್ ಶಹಜಾದ್ ಗೆ ಇದೆಯಂತೆ.ಹಾಗಂತ ಪಾಕ್ ನ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಹೇಳಿಕೊಂಡಿದ್ದಾರೆ. ಶಹಜಾದ್ ರ ಪ್ರತಿಭೆ ನೋಡಿದರೆ ಅವರಿಗೆ ಸಚಿನ್, ಸೆಹ್ವಾಗ್ ರನ್ನೂ ಮೀರಿಸುವ ಸಾಮರ್ಥ್ಯವಿದೆ ಎಂದು ರಜಾಕ್ ಹೇಳಿಕೊಂಡಿದ್ದಾರೆ.ಟಿವಿ ಸಂದರ್ಶನವೊಂದರಲ್ಲಿ ರಜಾಕ್ ಈ ರೀತಿ ಅತಿರೇಕದ ಹೋಲಿಕೆ ಮಾಡಿದ್ದಾರೆ.