ಸಿಡ್ನಿ: ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಹೇಳಿಕೊಳ್ಳುವಂತಹ ಸಾಧನೆ ಮಾಡದೇ ಇರಬಹುದು. ಆದರೆ ವಿರಾಟ್ ಕೊಹ್ಲಿಯನ್ನು ಕೆಣಕುವ ದುಸ್ಸಾಹಸ ಮಾಡಬೇಡಿ ಎಂದು ಮಾಜಿ ಕ್ರಿಕೆಟಿಗ ಆಡಂ ಗಿಲ್ ಕ್ರಿಸ್ಟ್ ತಮ್ಮ ದೇಶದ ಕ್ರಿಕೆಟಿಗರಿಗೆ ಎಚ್ಚರಿಕೆ ನೀಡಿದ್ದಾರೆ.ವಿರಾಟ್ ಕೊಹ್ಲಿ ಬಳಗದಲ್ಲಿ ವಿದೇಶಗಳಲ್ಲಿ ಉತ್ತಮ ನಿರ್ವಹಣೆ ತೋರಬಲ್ಲ ಬೌಲರ್ ಗಳು, ಬ್ಯಾಟ್ಸ್ ಮನ್ ಗಳಿದ್ದಾರೆ. ವಿಶೇಷವಾಗಿ ಸ್ವತಃ ಕೊಹ್ಲಿ ವಿಶ್ವ ಶ್ರೇಷ್ಠ ಕ್ರಿಕೆಟಿಗ. ಹೀಗಾಗಿ ಅವರನ್ನು ಕಡೆಗಣಿಸಲಾಗದು ಎಂದು ಗಿಲ್ ಕ್ರಿಸ್ಟ್ ಅಭಿಪ್ರಾಯಪಟ್ಟಿದ್ದಾರೆ.ಈ