ವಿಶ್ವ ಕ್ರಿಕೆಟ್`ನಲ್ಲಿ ಗಮನ ಸೆಳೆಯುತ್ತಿರುವ ಆಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಈಗಾಗಲೇ ತಮ್ಮ ಪ್ರತಿಭೆಯನ್ನ ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿದ್ದಾರೆ.ಇದೀಗ, ಮತ್ತೊಬ್ಬ ಆಫ್ಘಾನಿಸ್ತಾನದ ಯುವ ಕ್ರಿಕೆಟಿಗ ಟಿ-20 ಕ್ರಿಕೆಟ್`ನಲ್ಲಿ ದ್ವಿಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ಆಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್`ಮನ್ ಶಫಿಕುಲ್ಲಾ ಶಫಾಕ್ 71 ಎಸೆತಗಳಲ್ಲಿ 214 ರನ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ದೇಶೀಯ ಪರಗಾನ್ ಚಾಂಪಯನ್ಸ್ ಟ್ರೋಫಿಯಲ್ಲಿ ಶಫಾಕ್ 21