ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ಚಿಂತೆಗೆ ಕಾರಣವಾಗಿದೆ.ವಿಶೇಷವೆಂದರೆ ಪಂದ್ಯವನ್ನೇ ಆಡದ ಆಟಗಾರರೇ ಗಾಯಕ್ಕೊಳಗಾಗುತ್ತಿರುವುದು ವಿಪರ್ಯಾಸ. ಸರಣಿಯ ಆರಂಭಕ್ಕೂ ಮೊದಲ ಅಭ್ಯಾಸ ಪಂದ್ಯವಾಡುವಾಗ ಪೃಥ್ವಿ ಶಾ ಗಾಯಗೊಂಡಿದ್ದರು. ಅದಾದ ಬಳಿಕ ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ ಗಾಯಾಳುಗಳ ಲಿಸ್ಟ್ ಗೆ ಸೇರ್ಪಡೆಯಾಗಿದ್ದರು.ಇದೀಗ ಪಂದ್ಯವೇ ಆಡದ ರವೀಂದ್ರ ಜಡೇಜಾ ಗಾಯದ ಲಿಸ್ಟ್ ಗೆ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಅಶ್ವಿನ್ ಮತ್ತು ಜಡೇಜಾ ಮೂರನೇ ಟೆಸ್ಟ್ ಪಂದ್ಯದಲ್ಲಿ