ಸಿಡ್ನಿ: ಇಂಗ್ಲೆಂಡ್ ತಂಡ ಭಾರತದಲ್ಲಿ ಸೋಲುತ್ತಿರುವ ಪರಿ ಕಂಡು ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ತಂಡಕ್ಕೆ ನಡುಕ ಶುರುವಾಗಿದೆಯಂತೆ. ಅದಕ್ಕಾಗಿ ಈಗಾಗಲೇ ಕೆಲವು ಮುನ್ನಚ್ಚರಿಕೆ ಕ್ರಮಗಳನ್ನೂ ಕೈಗೊಂಡಿದೆ. ಭಾರತಕ್ಕೆ ಬಂದಾಗಿನಿಂದ ಒಂದು ಅಭ್ಯಾಸ ಪಂದ್ಯದಲ್ಲಿ ಜಯಗಳಿಸಿದ್ದು ಬಿಟ್ಟರೆ ಇಂಗ್ಲೆಂಡ್ ಟೆಸ್ಟ್ ಅಥವಾ ಏಕದಿನದಲ್ಲಿ ಒಂದೇ ಒಂದು ಗೆಲುವು ಕಂಡಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸೋಲಿನ ರೀತಿ ಹೀನಾಯವಾಗಿತ್ತು. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯಾ ಮುಂದಿನ ತಿಂಗಳು