ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಅಜಿಂಕ್ಯಾ ರೆಹಾನೆಗೆ ಇಷ್ಟು ದಿನ ನಾಯಕರಾಗಿದ್ದ ವಿರಾಟ್ ಕೊಹ್ಲಿ ಕೃಪಾಕಟಾಕ್ಷವಿತ್ತು.ಆದರೆ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಮೇಲೆ ತಂಡದ ಆಯ್ಕೆ ವಿಚಾರದಲ್ಲಿ ಸಂಪೂರ್ಣವಾಗಿ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಹಿಡಿತ ಹೊಂದಿದ್ದಾರೆ. ರೆಹಾನೆಗೆ ಜೊತೆಗಾರನಾಗಿದ್ದ ಪೂಜಾರ, ದೇಶೀಯ ಕ್ರಿಕೆಟ್ ಮತ್ತು ಕೌಂಟಿ ಕ್ರಿಕೆಟ್ ನಲ್ಲಿ ರನ್ ಗಳಿಸಿ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.ಆದರೆ ರೆಹಾನೆ ಮಾತ್ರ ಇನ್ನೂ ಪರದಾಡುತ್ತಿದ್ದಾರೆ.