ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಗೆ ಮೊದಲು ಎ ತಂಡದ ಪರ ಟೆಸ್ಟ್ ಆಡಿದ್ದ ಅಜಿಂಕ್ಯಾ ರೆಹಾನೆ ಕೋಚ್ ರಾಹುಲ್ ದ್ರಾವಿಡ್ ರಿಂದ ಹಸ್ತಾಕ್ಷರ ಬರೆಸಿದ ಬ್ಯಾಟ್ ಪಡೆದಿದ್ದರು.ಇಷ್ಟು ದಿನ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದ ರೆಹಾನೆಗೆ ಇದೀಗ ಆ ಬ್ಯಾಟ್ ನಿಂದ ಅದೃಷ್ಟ ಖುಲಾಯಿಸಿದೆ. ಈ ಸರಣಿಯುದ್ದಕ್ಕೂ ದ್ರಾವಿಡ್ ಹಸ್ತಾಕ್ಷರವಿರುವ ಬ್ಯಾಟ್ ಬಳಸಲು ರೆಹಾನೆ ನಿರ್ಧರಿಸಿದ್ದಾರೆ. ಅದರಂತೆ ಅಡಿಲೇಡ್ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಇದೇ ಬ್ಯಾಟ್