ಅಜಿಂಕ್ಯಾ ರೆಹಾನೆ ಕಿತ್ತು ಹಾಕಲು ನಿಮಗೆ ಧೈರ್ಯವಿಲ್ಲವೇ?!

ಅಹಮ್ಮದಾಬಾದ್| Krishnaveni K| Last Modified ಶುಕ್ರವಾರ, 26 ಫೆಬ್ರವರಿ 2021 (09:37 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲೂ ವಿಫಲರಾದ ಬಳಿಕ ಟೀಂ ಇಂಡಿಯಾ ಉಪನಾಯಕ ಅಜಿಂಕ್ಯಾ ರೆಹಾನೆ ಮೇಲೆ ಅಭಿಮಾನಿಗಳು ಟೀಕಾಪ್ರಹಾರ ನಡೆದಿದ್ದಾರೆ.

 
ರೆಹಾನೆ ಕಿತ್ತು ಹಾಕಲು ನಿಮಗೆ ಧೈರ್ಯವಿಲ್ಲವೇ? ಎಂದು ಟ್ವಿಟರಿಗರು ವಿರಾಟ್ ಕೊಹ್ಲಿಯನ್ನು ಪ್ರಶ್ನೆ ಮಾಡಿದ್ದಾರೆ. ನೀವು ನಿಜವಾಗಿಯೂ ಬ್ರೇವ್ ಕ್ಯಾಪ್ಟನ್ ಆಗಿದ್ದರೆ ಸತತವಾಗಿ ವೈಫಲ್ಯ ಕಾಣುತ್ತಿರುವ ರೆಹಾನೆ, ಚೇತೇಶ್ವರ ಪೂಜಾರರನ್ನು ಕಿತ್ತು ಹಾಕಿ. ಪ್ರತಿಭಾವಂತರಿಗೆ ಅವಕಾಶ ಕೊಡಿ ಎಂದು ಆಗ್ರಹಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಒಂದು ಶತಕ ಗಳಿಸಿದ್ದು, ಬಿಟ್ಟರೆ ಸದ್ಯಕ್ಕೆ ರೆಹಾನೆಯಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಇದರಿಂದಾಗಿ ಭಾರತ ಮಧ್ಯಮ ಕ್ರಮಾಂಕದಲ್ಲಿ ಬಲವಿಲ್ಲದೇ ಕುಸಿತ ಕಾಣುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :