Widgets Magazine

ಆಸ್ಟ್ರೇಲಿಯನ್ನರು ಯಾವತ್ತೂ ಅನಿಲ್ ಕುಂಬ್ಳೆಯನ್ನು ಈ ಕಾರಣಕ್ಕೆ ಸ್ಲೆಡ್ಜ್ ಮಾಡುತ್ತಿರಲಿಲ್ಲವಂತೆ!

ಬೆಂಗಳೂರು| Krishnaveni K| Last Modified ಗುರುವಾರ, 28 ನವೆಂಬರ್ 2019 (09:15 IST)
ಬೆಂಗಳೂರು: 2007-08 ರ ವಿವಾದಾತ್ಮಕ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದವರು ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ. ಉಭಯ ತಂಡದ ಆಟಗಾರರ ನಡುವೆ ಆಗ ಮಾತಿನ ಕದನ ಜೋರಾಗಿಯೇ ನಡೆದಿತ್ತು. ಆದರೆ ಇಂತಹ ಕಾವೇರಿದ ಸಂದರ್ಭದಲ್ಲೂ ಆಸೀಸ್ ಆಟಗಾರರು ಅನಿಲ್ ಕುಂಬ್ಳೆ ಮೇಲೆ ಸ್ವಲ್ಪವೂ ಸ್ಲೆಡ್ಜ್ ಮಾಡುತ್ತಿರಲಿಲ್ಲವಂತೆ!

 
ಇದಕ್ಕೆ ಕಾರಣವೇನು ಗೊತ್ತಾ? ಈ ಬಗ್ಗೆ ಸ್ವತಃ ಕುಂಬ್ಳೆಯೇ ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಅನಿಲ್ ಕುಂಬ್ಳೆಗೆ ಆಸೀಸ್ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಜತೆಗಿದ್ದ ಸ್ನೇಹ.
 
‘ಯಾರೋ ಹೇಳಿದ್ದರು ಶೇನ್ ವಾರ್ನ್ ಸ್ನೇಹಿತರಾಗಿದ್ದರೆ ಆಸ್ಟ್ರೇಲಿಯನ್ನರು ಆ ಆಟಗಾರರ ತಂಟೆಗೆ ಬರಲ್ಲ ಎಂದು. ನನಗೆ ವಾರ್ನ್ ಜತೆಗೆ ಉತ್ತಮ ಸ್ನೇಹ ಸಂಬಂಧವಿತ್ತು. ಹೀಗಾಗಿ ಸರಣಿಯಲ್ಲಿ ಯಾರೂ ನನ್ನೊಂದಿಗೆ ಮಾತಿನ ಚಕಮಕಿ ನಡೆಸುವ ಪ್ರಯತ್ನವೂ ಮಾಡುತ್ತಿರಲಿಲ್ಲ’ ಎಂದು ಕುಂಬ್ಳೆ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :