ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಗಾಯಗೊಂಡ ರವೀಂದ್ರ ಜಡೇಜಾ ಬದಲಿ ಆಟಗಾರನಾಗಿ ಯಜುವೇಂದ್ರ ಚಾಹಲ್ ರನ್ನು ಆಡಿಸಿದ ವಿವಾದದ ಬಗ್ಗೆ ಅನಿಲ್ ಕುಂಬ್ಳೆ ಸ್ಪಷ್ಟನೆ ನೀಡಿದ್ದಾರೆ. ಐಸಿಸಿಯ ನೀತಿ ನಿಯಮಾಳಿ ರೂಪಿಸುವ ಮಂಡಳಿಯ ಪ್ರಮುಖರೂ ಆಗಿರುವ ಕುಂಬ್ಳೆ ಜಡೇಜಾ ಸ್ಥಾನದಲ್ಲಿ ಚಾಹಲ್ ರನ್ನು ಬದಲಿ ಆಟಗಾರನಾಗಿ ಬಳಸಿದ್ದು ತಪ್ಪಲ್ಲ ಎಂದಿದ್ದಾರೆ. ‘ಆಸ್ಟ್ರೇಲಿಯಾ ಕ್ರಿಕೆಟಿಗ ಫಿಲ್ ಹ್ಯೂಸ್ ತಲೆಗೆ ಚೆಂಡು ಬಡಿದು ಸಾವನ್ನಪ್ಪಿದ ಬಳಿಕ ಈ ನಿಯಮಾವಳಿ ರೂಪಿಸಲಾಗಿದೆ.