ಚಾಂಪಿಯನ್ಸ್ ಟ್ರೋಫಿ ಫೈನಲ್`ನಲ್ಲಿ ಭಾರತ ತಂಡ ಹೀನಾಯ ಸೋಲು ಮತ್ತು ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಮನಸ್ತಾಪದ ಬಳಿಕ ಜರ್ಜರಿತರಾಗಿರುವ ಟೀಮ್ ಇಂಡಿಯಾ ಹೆಡ್ ಕೋಚ್ ಅನಿಲ್ ಕುಂಬ್ಳೆ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಎಎನ್`ಐ ವರದಿ ಮಾಡಿದೆ. ಈ ವರದಿಗಳು ನಿಜವಾದರೆ 5 ಏಕದಿನ ಪಂದ್ಯ ಮತ್ತು ಏಕೈಕ ಟಿ-20 ಪಂದ್ಯವನ್ನೊಳಗೊಂಡ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅನಿಲ್ ಕುಂಬ್ಳೆ ತಂಡದ ಜೊತೆ ತೆರಳುವುದಿಲ್ಲ. ನೂತನ ಕೋಚ್ ಆಯ್ಕೆ ಪ್ರಕ್ರಿಯೆ