ಕೊಲೊಂಬೋ: ತಂದೆಗೆ ತಕ್ಕ ಮಗ ಎನ್ನುವುದನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ನಿರೂಪಿಸಿದ್ದಾನೆ.ಇದೇ ಮೊದಲ ಬಾರಿಗೆ ಅಂಡರ್ 19 ತಂಡಕ್ಕೆ ಆಯ್ಕೆಯಾಗಿರುವ ಅರ್ಜುನ್ ತೆಂಡುಲ್ಕರ್, ಮೊದಲ ಬಾರಿ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿದ್ದಾರೆ. ಶ್ರೀಲಂಕಾ ವಿರುದ್ಧ ಕೊಲೊಂಬೋದಲ್ಲಿ ನಡೆಯುತ್ತಿರುವ ತ್ರಿದಿನ ಪಂದ್ಯದಲ್ಲಿ ಅರ್ಜುನ್ ತೆಂಡುಲ್ಕರ್ ಶೂನ್ಯಕ್ಕೆ ಔಟಾಗಿದ್ದಾರೆ.11 ಎಸೆತ ಎದುರಿಸಿದ ಅರ್ಜುನ್ ತೆಂಡುಲ್ಕರ್ ಶಶಿಕಾ ದುಲ್ಶನ್ ಬೌಲಿಂಗ್ ನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಸಚಿನ್ ರನ್ನು ನೆನಪಿಸಿದ್ದಾರೆ.