ಚೊಚ್ಚಲ ವಿಕೆಟ್ ಕಿತ್ತ ಸಂಭ್ರಮದಲ್ಲಿ ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್

ಮುಂಬೈ| Krishnaveni K| Last Modified ಶುಕ್ರವಾರ, 15 ಜನವರಿ 2021 (17:23 IST)
ಮುಂಬೈ: ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮುಂಬೈ ಪರ ಆಡಲು ಮೊದಲ ಬಾರಿಗೆ ಅವಕಾಶ ಪಡೆದ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಚೊಚ್ಚಲ ವಿಕೆಟ್ ಕಿತ್ತು ಸಂಭ್ರಮಿಸಿದ್ದಾರೆ.

 
ಹರ್ಯಾಣ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ಎದುರಾಳಿ ಚೈತನ್ಯ ಬಿಷ್ಣೋಯ್ ವಿಕೆಟ್ ಕಬಳಿಸಿದ್ದಾರೆ. ಆದರೆ ಮೊದಲ ಓವರ್ ನಲ್ಲೇ 15 ರನ್ ಚಚ್ಚಿಸಿಕೊಂಡಿದ್ದಾರೆ. ಆಲ್ ರೌಂಡರ್ ಆಗಿರುವ ಅರ್ಜುನ್ ಗೆ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಹಿರಿಯರ ತಂಡದಲ್ಲಿ ಅವಕಾಶ ಪಡೆದ ಅರ್ಜುನ್ ವಿಕೆಟ್ ಕಿತ್ತು ಸಂಭ್ರಮಾಚರಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :