ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅರೆಸ್ಟ್ ವಾರೆಂಟ್

ಕೋಲ್ಕೊತ್ತಾ| Krishnaveni K| Last Modified ಮಂಗಳವಾರ, 3 ಸೆಪ್ಟಂಬರ್ 2019 (09:16 IST)
ಕೋಲ್ಕೊತ್ತಾ: ಟೀಂ ಇಂಡಿಯಾ ಪ್ರಮುಖ ವೇಗಿ ಮೊಹಮ್ಮದ್ ಶಮಿ ವಿರುದ್ಧ ಕೋಲ್ಕೊತ್ತಾದ ನ್ಯಾಯಾಲಯ  ಬಂಧನ ವಾರೆಂಟ್ ಹೊರಡಿಸಿದೆ.

 
ಪತ್ನಿ ಹಸೀನ್ ಜಹಾನ್ ಮೇಲಿನ ಗೃಹ ಹಿಂಸೆ ಪ್ರಕರಣ ಈ ಹಿಂದೆ ಶಮಿ ವಿರುದ್ಧ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಶಮಿ ಕೋರ್ಟ್ ಗೆ ಹಾಜರಾಗದೇ ಇರುವ ಕಾರಣಕ್ಕೆ ಅವರ ವಿರುದ್ಧ ಈಗ ಬಂಧನ ವಾರೆಂಟ್ ಹೊರಡಿಸಲಾಗಿದೆ.
 
15 ದಿನಗಳೊಳಗಾಗಿ ಕೋರ್ಟ್ ಗೆ ಹಾಜರಾಗಲೇ ಬೇಕು ಎಂದು ಆದೇಶ ಹೊರಡಿಸಲಾಗಿದೆ. ಇದೀಗ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ಆಡುತ್ತಿರುವ ಶಮಿ ಸದ್ಯದಲ್ಲೇ ತವರಿಗೆ ಮರಳಲಿದ್ದಾರೆ. ತವರಿಗೆ ಬಂದ ಬಳಿಕ ಕೋರ್ಟ್ ಮುಂದೆ ಹಾಜರಾಗಬೇಕಿದೆ.
ಇದರಲ್ಲಿ ಇನ್ನಷ್ಟು ಓದಿ :