ಆಶಸ್ ಟೆಸ್ಟ್: ವಿರಾಟ್ ಕೊಹ್ಲಿ ದಾಖಲೆ ಮುರಿದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್

ಬರ್ಮಿಂಗ್ ಹ್ಯಾಮ್| Krishnaveni K| Last Modified ಶುಕ್ರವಾರ, 2 ಆಗಸ್ಟ್ 2019 (10:00 IST)
ಬರ್ಮಿಂಗ್ ಹ್ಯಾಮ್: ಕ್ರಿಕೆಟ್ ನಿಂದ ನಿಷೇಧ ಮುಗಿಸಿ ಬರೋಬ್ಬರಿ 16 ತಿಂಗಳ ಬಳಿಕ ಕ್ರಿಕೆಟ್ ಗೆ ಕಾಲಿಟ್ಟಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಆಶಸ್ ಟೆಸ್ಟ್ ನ ಮೊದಲ ಪಂದ್ಯದಲ್ಲಿಯೇ ಶತಕ ಗಳಿಸಿ ದಾಖಲೆ ಮಾಡಿದ್ದಾರೆ.

 
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ 24 ನೇ ಟೆಸ್ಟ್ ಶತಕ ದಾಖಲಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 24 ಶತಕ ಗಳಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಅಳಿಸಿದ್ದಾರೆ.
 
118 ಇನಿಂಗ್ಸ್ ನಲ್ಲಿ ಸ್ಮಿತ್ ಈ ದಾಖಲೆ ಮಾಡಿದ ಜಾಗತಿಕ ಕ್ರಿಕೆಟ್ ನಲ್ಲಿ ಡಾನ್ ಬ್ರಾಡ್ಮನ್ ನಂತರದ ಸ್ಥಾನ ಪಡೆದರು. ಮೊದಲ ದಿನದಂತ್ಯಕ್ಕೆ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 284 ರನ್ ಗೆ ಆಲೌಟ್ ಆಗಿದ್ದರೆ ಇಂಗ್ಲೆಂಡ್ ಮೊದಲ ಸರದಿಯಲ್ಲಿ ವಿಕೆಟ್ ನಷ್ಟವಿಲ್ಲದೇ 10 ರನ್ ಗಳಿಸಿತ್ತು.
ಇದರಲ್ಲಿ ಇನ್ನಷ್ಟು ಓದಿ :