ಏಷ್ಯಾ ಕಪ್ ಕ್ರಿಕೆಟ್ ಕೂಟ ರದ್ದು: ಪಾಕ್ ಕನಸಿಗೆ ತಣ್ಣೀರು

Sourav Ganguly
ನವದೆಹಲಿ| Krishnaveni K| Last Modified ಗುರುವಾರ, 9 ಜುಲೈ 2020 (09:44 IST)
ನವದೆಹಲಿ: ಸೆಪ್ಟೆಂಬರ್ ನಲ್ಲಿ ಹೇಗಾದರೂ ಮಾಡಿ ಏಷ್ಯಾ ಕಪ್ ಟೂರ್ನಿ ನಡೆಸಿಯೇ ತೀರುತ್ತೇವೆ ಎಂದಿದ್ದ ಪಾಕ್ ಕ್ರಿಕೆಟ್ ಮಂಡಳಿ ಕನಸಿಗೆ ತಣ್ಣೀರು ಬಿದ್ದಿದೆ. ಇದೀಗ ಅಧ‍್ಯಕ್ಷ ಸೌರವ್ ಗಂಗೂಲಿ ಏಷ್ಯಾ ಕಪ್ ಕ್ರಿಕೆಟ್ ಕೂಟ ರದ್ದಾಗಿರುವುದಾಗಿ ಘೋಷಿಸಿದ್ದಾರೆ.
 

ಪಾಕ್ ಮಂಡಳಿ ಈ ಬಾರಿ ಭಾರತ ವಿರೋಧಿಸಿದ್ದರಿಂದ ಪಾಕ್ ನ ಬದಲು ಯುಎಇನಲ್ಲಿ ಟೂರ್ನಮೆಂಟ್ ನಲ್ಲಿ ಆಯೋಹಿಸಲು ಸಿದ್ಧತೆ ನಡೆಸಿತ್ತು. ಇತ್ತೀಚೆಗೆ ಐಪಿಎಲ್ ಗಾಗಿ ಏಷ್ಯಾ ಕಪ್ ಮುಂದೂಡಿಕೆ ಮಾಡಲ್ಲ ಎಂದೂ ಖಡಕ್ ಆಗಿ ಹೇಳಿತ್ತು.
 
ಆದರೆ ಈಗ ಗಂಗೂಲಿ ಇನ್ ಸ್ಟಾಗ್ರಾಂ ಚ್ಯಾಟ್ ವೇಳೆ ಏಷ್ಯಾ ಕಪ್ ಕೂಟ ರದ್ದಾಗಿರುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ನಿರ್ದಿಷ್ಟ ಕಾರಣ ನೀಡಿಲ್ಲ.
ಇದರಲ್ಲಿ ಇನ್ನಷ್ಟು ಓದಿ :