ದುಬೈ: ಏಷ್ಯಾ ಕಪ್ ನಲ್ಲಿ ಭಾರತ ಇಂದು ಸೂಪರ್ ಫೋರ್ ಹಂತದ ಕೊನೆಯ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಆಡಲಿದೆ.ಟೀಂ ಇಂಡಿಯಾ ಕಳೆದ ಎರಡೂ ಸೂಪರ್ ಫೋರ್ ಹಂತದ ಪಂದ್ಯಗಳನ್ನು ಸೋತಿರುವುದರಿಂದ ಫೈನಲ್ ಕನಸು ಕ್ಷೀಣವಾಗಿದೆ. ಒಂದು ವೇಳೆ ಭಾರತ ಫೈನಲ್ ಗೇರಬೇಕಾದರೆ ಪಾಕಿಸ್ತಾನ ಲಂಕಾ, ಅಫ್ಘಾನಿಸ್ತಾನ ವಿರುದ್ಧ ಸೋಲಬೇಕು. ಅದು ಅಸಾಧ್ಯವಾಗಿರುವುದರಿಂದ ಭಾರತಕ್ಕೆ ಈ ಪಂದ್ಯ ಔಪಚಾರಿಕವಾಗುವ ಸಾಧ್ಯತೆಯಿದೆ.ಕಳೆದ ಎರಡು ಪಂದ್ಯಗಳಲ್ಲಿ ತಂಡದ ಆಯ್ಕೆಯೇ ಎಲ್ಲರ ಟೀಕೆಗೆ ಗುರಿಯಾಗಿದೆ. ಹೀಗಾಗಿ