ಕೊಲೊಂಬೋ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಸೂಪರ್ ಫೋರ್ ಪಂದ್ಯ ನಡೆಯಲಿದೆ.ಲೀಗ್ ಹಂತದಲ್ಲಿ ಎರಡೂ ತಂಡಗಳೂ ಮುಖಾಮುಖಿಯಾಗಿದ್ದರೂ ಮಳೆಯಿಂದಾಗಿ ಎರಡನೇ ಸರದಿಯ ಆಟ ನಡೆದಿರಲಿಲ್ಲ. ಇಂದಿನ ಪಂದ್ಯಕ್ಕೂ ಮಳೆ ಭೀತಿಯಿದೆ. ಆದರೆ ಮಳೆ ಕೊಂಚ ಬಿಡುವು ನೀಡಿ ಪಂದ್ಯ ನಡೆಯುವಂತಾಗಲಿ ಎಂಬುದು ಅಭಿಮಾನಿಗಳ ಹಾರೈಕೆ.ಕಳೆದ ಬಾರಿ ಎರಡೂ ತಂಡಗಳೂ ಮುಖಾಮುಖಿಯಾಗಿದ್ದಾಗ ಭಾರತದ ಬ್ಯಾಟಿಂಗ್ ಕೈಕೊಟ್ಟಿತ್ತು. ಪಾಕ್ ವಿರುದ್ಧ ಗೆಲ್ಲಬೇಕಾದರೆ ಟೀಂ ಇಂಡಿಯಾ