ದುಬೈ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ನ ಅಪ್ಪಟ ರೋಚಕತೆ ಮರಳಿ ಬಂದಂತಾಗಿದೆ. ಏಷ್ಯಾ ಕಪ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿಗಳಾದ ಎರಡೂ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿ ಪ್ರೇಕ್ಷಕರಿಗೆ ರಸದೌತಣ ನೀಡಿದರು.ಪಾಕಿಸ್ತಾನ ಬೌಲರ್ ಗಳು ರೋಹಿತ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಎಂಬ ಟೀಂ ಇಂಡಿಯಾದ ಬಿಗ್ ಥ್ರೀ ಬ್ಯಾಟಿಗರಿಗೆ ತಯಾರಾಗಿ ಬಂದಿದ್ದರು. ಆದರೆ ರವೀಂದ್ರ ಜಡೇಜಾ-ಹಾರ್ದಿಕ್ ಪಾಂಡ್ಯ ಔಟ್ ಆಫ್ ಸಿಲಬಸ್ ಆಗಿ ಬಂದರು.