ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ಕೊಲೊಂಬೋದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ.ಈಗಾಗಲೇ ಉಭಯ ತಂಡಗಳೂ ಸೂಪರ್ ಫೋರ್ ಹಂತದಲ್ಲಿ ಮುಖಾಮುಖಿಯಾಗಿದ್ದವು. ಆಗ ಶ್ರೀಲಂಕಾವನ್ನು ಟೀಂ ಇಂಡಿಯಾ ಸೋಲಿಸಿತ್ತು. ಆದರೂ ಲಂಕಾ ಬೌಲರ್ ಗಳೆದುರು ಟೀಂ ಇಂಡಿಯಾ ಬ್ಯಾಟಿಗರು ತಡಬಡಾಯಿಸಿದ್ದರು.ಕೊಲೊಂಬೋದಲ್ಲಿ ಇದುವರೆಗೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಮೇಲುಗೈ ಸಾಧಿಸಿದೆ. ಹೀಗಾಗಿ ಇಂದು ಟಾಸ್