ಮುಂಬೈ: ಪುರುಷರ ಐಪಿಎಲ್ ಜೊತೆಗೆ ಮಹಿಳೆಯರ ಐಪಿಎಲ್ ಕೂಟಕ್ಕೂ ಹರಾಜು ಪ್ರಕ್ರಿಯೆಗೆ ದಿನ ನಿಗದಿಯಾಗಿದೆ. ಈ ಬಾರಿ ಪ್ರತೀ ಫ್ರಾಂಚೈಸಿಯ ಮೊತ್ತ ಹೆಚ್ಚಾಗಿದೆ.ಡಿಸೆಂಬರ್ 9 ರಂದು ಮುಂಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿಯೊಂದು ಫ್ರಾಂಚೈಸಿಯ ಹಣದ ಮೊತ್ತವನ್ನು 13.5 ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ. ಇದು ಎರಡನೇ ಆವೃತ್ತಿಯ ಮಹಿಳಾ ಐಪಿಎಲ್ ಆಗಿದ್ದು, ಫೆಬ್ರವರಿಯಲ್ಲಿ ಟೂರ್ನಮೆಂಟ್ ನಡೆಯಲಿದೆ.ಒಟ್ಟು ಐದು ಫ್ರಾಂಚೈಸಿಗಳಿದ್ದು, ಈ ಬಾರಿ ಮುಂಬೈ ಮತ್ತು ಬೆಂಗಳೂರಿನಲ್ಲಿ ಪಂದ್ಯ ನಡೆಯುವ