ಮುಂಬೈ: ಆಸ್ಟ್ರೇಲಿಯಾ ಪ್ರವಾಸ ಮಾಡಲಿರುವ ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ನಾಯಕ ವಿರಾಟ್ ಕೊಹ್ಲಿ ಪ್ರಚಂಡ ಫಾರ್ಮ್ ಬಗ್ಗೆ ಅತಿಥೇಯ ತಂಡಕ್ಕೆ ಈಗಲೇ ಚಿಂತೆ ಶುರುವಾಗಿದೆ.ಟೀಂ ಇಂಡಿಯಾದ ಬೇರೆ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕುವುದು ಸುಲಭ. ಆದರೆ ಕೊಹ್ಲಿ ಇಂಗ್ಲೆಂಡ್ ನಲ್ಲೂ ಸೈ ಎನಿಸಿಕೊಂಡಿರುವುದರಿಂದ ಪ್ರಚಂಡ ಫಾರ್ಮ್ ನಲ್ಲಿರುವ ಅವರನ್ನು ನಿಯಂತ್ರಿಸುವ ಬಗೆ ಬಗ್ಗೆ ಈಗಾಗಲೇ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಲೆ ಕೆಡಿಸಿಕೊಂಡಿದೆ. ಜನವರಿಯಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಏಕದಿನ