ಭಾರತ-ಆಸೀಸ್ ಟೆಸ್ಟ್: ಆಸ್ಟ್ರೇಲಿಯಾ 369 ಕ್ಕೆ ಆಲೌಟ್

ಬ್ರಿಸ್ಬೇನ್| Krishnaveni K| Last Modified ಶನಿವಾರ, 16 ಜನವರಿ 2021 (08:44 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ ಆಸೀಸ್ 369 ಕ್ಕೆ ಆಲೌಟ್ ಆಗಿದೆ.
 

ನಿನ್ನೆ 5 ವಿಕೆಟ್ ಗೆ 274 ರನ್ ಗಳಿಸಿ ದಿನದಾಟ ಮುಗಿಸಿದ್ದ ಆಸ್ಟ್ರೇಲಿಯಾ ಇಂದು 369 ಕ್ಕೆ ಸರ್ವಪತನ ಕಂಡಿತು. ಭಾರತದ ಪರ ಟಿ ನಟರಾಜನ್, ವಾಷಿಂಗ್ಟನ್ ಸುಂದರ್ ಮತ್ತು ಶ್ರಾದ್ಧೂಲ್ ಠಾಕೂರ್ ತಲಾ 3 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದರು. ಭಾರತ ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 11 ರನ್ ಗಳಿಸಿದೆ.
ಇದರಲ್ಲಿ ಇನ್ನಷ್ಟು ಓದಿ :