ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತವನ್ನೇ ಪೇರಿಸಿದೆ.ನಿಗದಿತ 50 ಓವರ್ ಗಳಲ್ಲಿ ಆಸೀಸ್ 5 ವಿಕೆಟ್ ನಷ್ಟಕ್ಕೆ 313 ರನ್ ಗಳಿಸಿದೆ. ಇದು ರಾಂಚಿ ಮೈದಾನದಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತವಾಗಿದೆ. ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜ ಶತಕ (104) ಮತ್ತು ನಾಯಕ ಏರಾನ್ ಫಿಂಚ್ ಅರ್ಧಶತಕ (93) ಗಳಿಸಿ ಮೊದಲ ವಿಕೆಟ್ ಗೆ