ಕೇಪ್ ಟೌನ್: ಮಹಿಳಾ ಕ್ರಿಕೆಟ್ ಗೆ ಮತ್ತೆ ಆಸ್ಟ್ರೇಲಿಯಾ ತಂಡ ಅರಸಿಯಾಗಿ ಮೆರೆದಿದೆ. ದ.ಆಫ್ರಿಕಾ ವಿರುದ್ಧ ಮಹಿಳಾ ಟಿ20 ವಿಶ್ವಕಪ್ ಫೈನಲ್ ನಲ್ಲಿ 19 ರನ್ ಗಳ ಗೆಲುವು ಸಾಧಿಸಿ ಆರನೇ ಬಾರಿ ಚಾಂಪಿಯನ್ ಆಗಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದವರಿಗೇ ಗೆಲುವು ಎನ್ನುವುದು ಮತ್ತೆ ಈ ಪಂದ್ಯದಲ್ಲೂ ಖಚಿತವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ವನಿತೆಯರು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು.